Sunday, September 28, 2008

ಪ್ರೇಮದಾ ಜಿಂಕೆ

ಚಂಗನೆ ಹಾರುತಿದೆ ಅದು ಸಂಸಾರದ ಬನಕೆ
ಎಲ್ಲರನು ಸೆಳೆದಿದೆ ಈ ಪ್ರೇಮದಾ ಜಿಂಕೆ

ತರುಣಿಯರು ನಿಬ್ಬೆರಗಾದರು ಅದರ ನೋಟದಿಂದ
ಬೇಡರು ಚಕಿತರಾದರು ಅದರ ಓಟದಿಂದ
ಮಕ್ಕಳು ನಲಿದಾಡಿದರು ಕಂಡು ಅದರ ನಲಿವಿನಿಂದ
ಸರ್ವರು ಮನಸೂರೆಗೊಂಡರು ಆ ಹೊಂಬಣ್ಣದಿಂದ

ಈ ಪ್ರೇಮವೆಂಬ ಜಿಂಕೆಯ ಹಿಂದೆ ನೀನಿರು
ದ್ವೇಷವೆಂಬ ಹೆಬ್ಬುಲಿಯಿಂದ ನೀ ದೂರವಿರು
'ಪ್ರೀತಿ-ಪ್ರೇಮದಿಂದಲೇ ಪ್ರಪಂಚ'ವೆಂದು ಸಾರು
ದ್ವೇಷವ ಮರೆತು ಕಾಣು ನೀ ಪ್ರೀತಿಯ ಕಾರುಬಾರು

ದ್ವೇಷದಿಂದಲೇ ಮನಕೆ ಸಾವಿರಾರು ವೇದನ
ಪ್ರೀತಿಯಿಂದ ನಾ ಕಂಡುಕೊಂಡೆ ನಲಿವ ಜೀವನ
ಎಲ್ಲರನು ಪ್ರೀತಿಸುತಲಿ ಕಾಣು ನೀ ನಂದನ
ದ್ವೇಷವೆಂಬುದೇ ವೇದನ, ಪ್ರೇಮವೆಂಬುದೇ ಚಂದನ

2 comments:

Anonymous said...

ಡಿಯರ್ ಸರ್

ನಿಮ್ಮ ಪ್ರೇಮಾದ ಜಿಂಕೆ ಎಲ್ಲರ ಜೀವನದಲ್ಲಿ ಅನುಸರಿಸುವಂತಿದೆ ಅದರಿಂದಾಗಿ ನನಗೆ ತುಂಬಾ ಇಷ್ಠವಾಗಿದೆ

ಭಕ್ತ ಪ್ರಹ್ಲಾದ
ಎತ್ತಿಗೌಡರಹಟ್ಟಿ
nannivalabaktha@gmail.com
ph:9740894485

RAGHAVENDRA R said...

ಜಿಂಕೆ ಮರಿ ಓಡ್ತಾ ಐತೆ..

ಪ್ರೀತಿಯಿಂದ ಬದುಕನ್ನು ಸವಿಯಿರಿ..
ದ್ವೇಷದ ಮರೆತು ಸರ್ಗವನು ಕಾಣಿರಿ..