Tuesday, September 30, 2008

ಶ್ರೀರಾಮನ ರಾಮಾಯಣ

ಹೇ ದೇವಾ, ಶ್ರೀರಾಮ ನಿನ್ನಯ ರಾಮಾಯಣ
ಪುಣ್ಯ ಬರುವುದು, ನಿತ್ಯ ಮಾಡಿದರೆ ಪಾರಾಯಣ

ವಿಶ್ವಾಮಿತ್ರನ ಸಲಹೆಯಂತೆ ಆ ಗುರುವಿಗೆ ಶಿಷ್ಯನಾದೆ
ಅವನ ಮಾತಿನಂತೆ ತಾಟಕಾಸುರಿಯನು ಕೊಂದೆ
ನೀ ಜಟಾಧಾರಿಯಾಗಿ ವನರಮ್ಯತೆಯಲಿ ಮುಳುಗಿದೆ
ಶಿಕ್ಷಿತನಾಗಿ, ಅಯೋದ್ಯೆಗೆ ತಿರುಗಿ ಪಯಣ ಬೆಳೆಸಿದೆ

ಜನಕರಾಜನ ಶಿವಧನಸ್ಸನು ಎದೆಗೇರಿಸಿ ಮುರಿದೆ
ಜನಕಪುತ್ರಿ ಜಾನಕಿಯನ್ನು ನೀ ವಿವಾಹವಾದೆ
ಪತ್ನೀಸಮೇತ ರಾಜ್ಯಕ್ಕಾಗಮಿಸಿ ನೀ ಸಂತಸಗೈದೆ
ಕೆಲದಿನದ ನಂತರ ತಂದೆಯ ಕಠಿಣ ವಚನ ಪಾಲಿಸಿದೆ

ಲಕ್ಷ್ಮಣ ಹಾಗೂ ಸೀತಾಸಮೇತ ವನವಾಸಕ್ಕೆ ತೆರಳಿದೆ
ತಂದೆ ಸಾವು, ಸೀತಾಪಹರಣದಿಂದ ಬಹಳ ನೊಂದೆ
ವಾನರಸೇನೆ ಸಹಾಯದಿಂದ ಲಂಕೆಯ ರಾವಣನ ಕೊಂದೆ
ನಿನ್ನ ಈ ರಾಮಾಯಣ ಓದಿ ನಾನು ಪುನೀತನಾದೆ

6 comments:

swathi_neelu said...

this was reyaly swathi

RAGHAVENDRA R said...

ಈ 12 ಸಾಲುಗಳಲ್ಲಿ.. ರಾಮಾಯಣವನ್ನು ಪರಿಚಯಿಸುವ ಪ್ರಯತ್ನವಷ್ಟೆ.

Prashanth P Khatavakar said...

ವಿಶ್ವಾಮಿತ್ರನ ಸಲಹೆಯಂತೆ ಆ ಗುರುವಿಗೆ ಶಿಷ್ಯನಾದೆ ----- ಅರ್ಥ ತಿಳಿಸಿ :)

RAGHAVENDRA R said...

‎"ದಶರಥನ ಆಸ್ಥಾನಕ್ಕೆ ಒಮ್ಮೆ ಆಗಮಿಸಿದ ವಿಶ್ವಾಮಿತ್ರನು, ರಾಮನ ವಿದ್ಯಾಭ್ಯಾಸಕ್ಕಾಗಿ ರಾಮ-ಲಕ್ಷ್ಮಣನನ್ನು ತನ್ನ ಆಶ್ರಮಕ್ಕೆ ಕಳುಹಿಸುವಂತೆ ದಶರಥನಿಗೆ ಸಲಹೆಯನ್ನು ನೀಡುತ್ತಾರೆ. ಆಗ ಶ್ರೀರಾಮನು ವಿಶ್ವಾಮಿತ್ರನ ಶಿಷ್ಯರಾಗಿ ಕಾಡಿಗೆ ಪಯಣ ಬೆಳೆಸುತ್ತಾರೆ." ಎಂಬುದು ಇದರ ಈ ವಾಕ್ಯದ ಅರ್ಥ. ಆದರೆ ಇಲ್ಲಿ ಯಾರು ಯಾರಿಗೆ ಹೇಳಿದರು ಗೊಂದಲ ಉಂಟಾಯ್ತು ಎನಿಸುತ್ತೆ ಅಲ್ಲವೇ ಗೆಳೆಯ. ಪ್ರಾರಂಭಿಕ ದಿನಗಳಲ್ಲಿ ಬರೆದ ಕವಿತೆಗಳಲ್ಲವೇ. ಹಾಗಾಗಿ ಈ ಲೋಪದೋಷಗಳು ಕಂಡಿವೆ. ನಿಮ್ಮ ಪ್ರತಿಕ್ರಿಯೆಗೆ ಹೃದಯ ಪೂರ್ವಕ ಧನ್ಯವಾದಗಳು.. Prashanth P Khatavakar

Prashanth P Khatavakar said...

‎@ R Raghavendra Padmashali.. ಈ ವಿಷಯ ಬಹುವಾಗಿ ಎಲ್ಲರೂ ಅರಿತಿರುವ ಕಾರಣ.. ಸುಮ್ಮನೆ ಸೊಗಸಾಗಿದೆ.. ಇಷ್ಟ ಆಯಿತು ಅಂತ ಹೇಳುವ ಬದಲು.. ಗೊಂದಲ ನಿವಾರಣೆಯಾದರೆ ಚೆಂದ ಎಂದು ಕೇಳಿದೆವು.. ಉತ್ತಮ ಪ್ರಯತ್ನ.. ಹಾಗು ಇತಿಹಾಸವನ್ನು ಈ ರೀತಿ ನಮ್ಮ ಮುಂದಿನ ಪೀಳಿಗೆಗಾಗಿ , ಮತ್ತೆ ಮತ್ತೆ ಬರೆಯುವುದು ತುಂಬಾ ಉಪಯುಕ್ತ ಕೊಡುಗೆ ಈ ಸಮಾಜಕ್ಕೆ ಹಾಗು ಕನ್ನಡಕ್ಕೂ ಸಹ.. ಮುಂದುವರೆಸಿರಿ ನಿಮ್ಮ ಈ ರೀತಿಯ ಪ್ರಯತ್ನವನ್ನು ಮತ್ತು ನಿಮಗೆ ಒಳ್ಳೆಯದಾಗಲಿ.. ಯಶಸ್ಸು ಲಭಿಸಲಿ.. :)

RAGHAVENDRA R said...

ನನಗೂ ನಿಮ್ಮಂತೆಯೇ ಕೇಳುವವರು ಇರಬೇಕು. ಇಲ್ಲವಾದಲ್ಲಿ ಗೊಂದಲವು ಹಾಗೆಯೇ ಉಳಿದುಕೊಂಡು ಬಿಡುತ್ತದೆ. ಬೇರೆಯವರಿಗೂ ಆ ಗೊಂದಲ ಬರದ ಹಾಗೇ ಮಾಡಿದಿರಿ. ನಿಜ ನೀವು ಹೇಳಿದ್ದು. ರಾಮಾಯಣ ಕುರಿತು ಎಲ್ಲರಿಗೂ ತಿಳಿದ ವಿಷಯವೇ ಆದರೂ ಇತ್ತೀಚಿನ ದಿನಗಳಲ್ಲಿ ನಮ್ಮ ಕಿರಿಯರಿಗೆ ಎಷ್ಟರ ಮಟ್ಟಿಗೆ ನಾವುಗಳು ಆ ಮೌಲ್ಯಗಳ ಕುರಿತು ತಿಳಿಸುತ್ತೇವೆ. ಅರಿತ ವಿಷಯವೇ ಆದರೂ ಮರೆತ ವಿಷಯದಂತಿದೆ. ನಿಮ್ಮ ಪ್ರೀತಿ-ವಿಶ್ವಾಸ-ಅಭಿಮಾನ ಹೀಗೆಯೇ ಇರಲಿ..ಗೆಳೆಯ ಪ್ರಶಾಂತ್ (@Prashanth P Khatavakar)