
ಬಂಧುಗಿಂತ ಹೆಚ್ಚು, ನನ್ನ ಹೊತ್ತು ಹೆತ್ತವಳು
ನಾ ಹೀಗೆ ಇರಬಯಸುವೆ ಅವಳ ಮಗನಾಗಿ
ಅವಳ ಮಮತೆಗೆ ನಾನಾದೆ ಮೂಗನಾಗಿ
ಇರುವೆ ಎಂದೂ ನನ್ನ ಹೆತ್ತವಳ ಸೇವಕನಾಗಿ
ಎಂದು ಬೇಡಿದೆ ಕಾಣದ ದೇವರ ದೀನನಾಗಿ
ಲೋಕಕ್ಕೆಲ್ಲಾ ಕಾಣುವ ನನ್ನೀ ತನುಮನವೆಲ್ಲಾ
ನವಮಾಸದಲಿ ನನಗೆ ಕೊಟ್ಟ ಕೊಡುಗೆ ಇದೆಲ್ಲಾ
ಎಂಥದ ಕಷ್ಟದ ಕಗ್ಗತ್ತಲಿನಲ್ಲೂ ನನ್ನ ಮರೆಯಲಿಲ್ಲಾ
ಈ ಉಡುಗೊರೆಯ ನಾನು ಮರೆಯುವುದಿಲ್ಲಾ
ಹಸುವಿನ ಕರು ಕೂಗುವುದು 'ಅಮ್ಮಾ' ಎಂದು
ಹಾರುವ ಹಕ್ಕಿಯ ಚಿಲಿಪಿಲಿ 'ಅಮ್ಮಾ' ಎಂದು
ಚಂಗನೆ ಹಾರುವ ಜಿಂಕೆಮರಿ ಕೂಗು 'ಅಮ್ಮಾ' ಎಂದು
ಸದಾ ನಾನೀಗಲೂ ಕೂಗುವೆ 'ಅಮ್ಮಾ' ಎಂದು
2 comments:
ಹೆತ್ತವಳು ನಿಜಕ್ಕೂ ದೇವತೆಯೇ ಸರಿ.ಅವಳನ್ನು ವರ್ಣಿಸಲು ಪದ ಪುಂಜಗಳು ಸಾಲವು, ಮಾತು ಹೊರಡವು ನೀರಿಕ್ಷೇಗೆ ಮೀರಿದ ಅವಳ ಕರುಣೆ,ದಯ,ಪ್ರೀತಿ,ಕನಿಕರ,ಮಮತೆ,ಆಧರಣೆಗಳು ಅವಳ ಸ್ಥಾನವನ್ನು ಉತ್ತುಂಗಕ್ಕೆ ಕೊಂಡೊಯ್ಯುದಿವೆ ಇಂತಹ ತಾಯಿಯ ಮಡಿಲಲ್ಲಿ ನಲಿವ ಮಕ್ಕಳು ಮಹಾ ಭಾಗ್ಯಶಾಲಿಗಳು ಹೆತ್ತವಳ ವರ್ಣಿಸಲೋರಟ ನಿಮ್ಮ ಕವನವು ಚಂದವಾಗಿ ನಿರೂಪಿಸಿದೆ ನಿಮ್ಮ ಆಲೋಚನೆ,ಅಭಿಪ್ರಾಯಗಳು ನಿಮ್ಮ ಹೆತ್ತವಳು ಕವನದ ಮೂಲಕ ಪ್ರಚಾರಪಡಿಸಿದ್ದು ಚೆನ್ನಾಗಿ ಮುಡಿಬಂದಿದೆ. ಆದರೂ ಹೆತ್ತವಳ ವರ್ಣಿಸಲು ಸಾವಿರಾರು ಕವನಗಳು ಹಾಗೂ ವಿಮರ್ಶೆಗಳು ನಿಮ್ಮಿಂದ ಚೆನ್ನಾಗಿ ಮೂಡಿಬರಲಿ ಎಂದು ಹಾರೈಸುವ........
ಭಕ್ತ ಪ್ರಹ್ಲಾದ
premaprahlada@gmail.com
mobail:9740894485
ಹೆತ್ತವಳ ಮಮತೆಯೇ ಹಾಗೆ.. ಗೆಳೆಯಾ...!
ಆ ಪ್ರೀತಿಯ ಮಮತೆಯಲ್ಲಿ ಸಿಲುಕದೇ ಇರದ ಯಾವ ಪ್ರಾಣಿ-ಪಕ್ಷಿಯೂ ಭೂಮಿಯ ಮೇಲೆ ಇಲ್ಲವೇ ಇಲ್ಲ... ಅಲ್ಲವೇ
Post a Comment