Tuesday, September 30, 2008

ಹಟ್ಟಿ ಉತ್ಸವ

ಹಟ್ಟಿಗೆ ಹೋಗೋಣ ನಾವು
ತಿಪ್ಪೇಶನ ಜಾತ್ರೆಗೆ ಹೋಗೋಣ

ಎತ್ತಿನ ಬಂಡಿಯ ಮೇಲೆ
ಎಲ್ಲರೂ ನಾವು ಏರಿ
ಸರಸರ ಹೆಜ್ಜೆಯನ್ನಿಕ್ಕುತ್ತಿದೆ
ಸಿಂಗರಿಸಿದ ನಮ್ ಹೋರಿ

ನೋಡಣ್ಣಾ ಅಲ್ಲಿದೆ
ಮುಗಿಲೆತ್ತರದಾ ತೇರು
ನಾಯಕನಹಟ್ಟಿ ಶ್ರೀ ಗುರು
ತಿಪ್ಪೇಶನ ಜಾತ್ರೆ ಬಲುಜೋರು

'ಮಾಡಿದಷ್ಟು ನೀಡು ಭಿಕ್ಷೆ'ಯ
ಕಾಯಕಯೋಗಿಯು ನೀನು
ಎಲ್ಲರನು ನೀ ಸಲಹಯ್ಯ
ಎಂದು ನಾ ನಿನ್ನ ಬೇಡುವೆನು

13 comments:

Vanishri said...

HI,tumba channagide....

Manju Varaga said...

ಜಾತ್ರೆ ಅಂದ್ರೆ ಅದು ಒಂಥರಾ ದೊಡ್ಡ ಹಬ್ಬದ ಥರಾ , ನಮ್ಮೂರ ಜನರು ಸುತ್ತ ಮುತ್ತಲಿನ ಗ್ರಾಮದ ಜನರು ಸೇರಿ ಆಚರಿಸುವ ಹಬ್ಬವಿದ್ದಂತೆ. ಜಾತ್ರೇಲಿ ಸಿಗುವ ಮಜಾನೇ ಬೇರೇ ಬಣ್ಣ ಬಣ್ಣದ ಚಿಟ್ಟೆಗಳು ಹಾಗೂ ಪಡ್ಡೆ ಹುಡುಗ್ರು.. ಆ ತೇರು ಆ ದೇವ್ರು ಆ ಜನ್ರು ಕಣ್ಣಿಗಂತು ಹಬ್ಬಾನೆ... ಎಲ್ಲವು ಚಂದ.. ತುಂಬಾ ಚೆಂದವಾದ ಸಾಲುಗಳು.

Srinivas VK said...

ತುಂಬಾ ಚೆನ್ನಾಗಿದೆ

RAGHAVENDRA R said...

ಧನ್ಯವಾದಗಳು ಗೆಳೆಯ Manju Varaga & Srinivas Vk

Banavasi Somashekar said...

ಕಾಯಕಯೋಗಿ ತಿಪ್ಪೇಶನ ಮೇಲಿನ ಭಕ್ತಿ ಪರವಶತೆ ಸುಂದರವಾಗಿ ಚಿತ್ರಿತ.

Paresh Saraf said...

ಕವನದಲ್ಲಿ ಗ್ರಾಮೀಣ ಸೊಗಡಿದೆ.. ಓದಿ ಖುಷಿಯಾಯಿತು.. ಶುಭವಾಗಲಿ :)

Manju Doddamani said...

ನನ್ನನು ಕರೆಯದೆ ಜಾತಿಗೆ ಹೋಗೋದು ತಪ್ಪಲ್ವ...... ಕವನ ಚನ್ನಾಗಿದೆ.... ಸ್ವಲ್ಪ ದೇವರ ಆರಾದನೇ ಇರಲಿ ದೇವತೆಯರ ಸಾಲಿನಲ್ಲಿ '

Sathis D. Ramanagara said...

ಮದಕರಿ ನಾಯಕರ ಪಟ್ಟಾಭಿಷೆಕವಾಯ್ತು , ಈಗ ಹಟ್ಟಿಯಲ್ಲಿ ಉತ್ಸವ ಮಾಡಲು ಹೊರಟಿರುವಿರಿ ಶುಭವಾಗಲಿ..

RAGHAVENDRA R said...

ಧನ್ಯವಾದಗಳು ಗೆಳೆಯ Banavasi Somashekhar

RAGHAVENDRA R said...

ಪಟ್ಟಣದಲ್ಲೇ ಹುಟ್ಟಿ ಬೆಳೆದ ನನಗೆ ಅಷ್ಟಾಗಿ ಗ್ರಾಮೀಣ ಪರಿಚಯವಿಲ್ಲ. ಆದರೂ ಗ್ರಾಮ್ಯ ಸೊಗಡನ್ನು ಕವನದಲ್ಬಿ ಬಿಂಬಿಸುವ ಪುಟ್ಟ ಪ್ರಯತ್ನ ಮಾಡಿದ್ದೇನೆ. ಧನ್ಯವಾದಗಳು ಗೆಳೆಯ .. Paresh Saraf

RAGHAVENDRA R said...

ಈ ವರ್ಷದ ಜಾತ್ರೆ ಇನ್ನೂ ಆಗಿಲ್ಲ ಮಂಜು. ಬಹುಶಃ ಮುಂದಿನ ತಿಂಗಳು ಅನಿಸುತ್ತೆ. ನೀನೆ ಹೇಳಿದಂತೆ ಸ್ವಲ್ಪ ದೇವರ ಆರಾಧನೆ ಇರಲಿ. ಧನ್ಯವಾದಗಳು Manju M Doddamani

RAGHAVENDRA R said...

ಪಟ್ಟಾಭಿಷೇಕದ ಸಂತಸದಲ್ಲಿ ಪಾಲ್ಗೊಂಡಿದ್ದು ಸಂತಸವಾಯ್ತು ಸತೀಶ್. ಹಾಗೇ ದೈವಾರಾಧನೆಗೆ ಅಂತಾ ನಮ್ಮ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ತಿಪ್ಪೇಸ್ವಾಮಿ ಜಾತ್ರೆಗೂ ಕರೆದೊಯ್ದಿದ್ದೇನೆ. ನಿಮ್ಮ ಹರಕೆಗೆ ಧನ್ಯವಾದಗಳು ಸತೀಶ್ ಡಿ. ಆರ್. ರಾಮನಗರ

RAGHAVENDRA R said...

ಕವಿತೆಯಲ್ಲಿ ಮೆಚ್ಚಿದ ಎಲ್ಲಾ ಗೆಳೆಯ ಗೆಳತಿಯರಿಗೂ ಧನ್ಯವಾದಗಳು.