
ನನಗೆ ಕಾಡುತಿದೆ ಆ ಕೋಗಿಲೆಯ ನೆನಪು
ಮರೆಯಲಾಗದದರ ಕಣ್ಣಂಚಿನ ಹೊಳಪು
ಆ ಕೋಗಿಲೆಯ ಮಧುರ ನೆನಪು ನನ್ನಲಿದೆ
ಅದಕ್ಕಾಗಿ ಹಾಡುವ ಆಸೆ ನನ್ನ ಕಣ್ಣಲಿದೆ
ಕೋಗಿಲೆಯ ಮಧುರರಾಗ ಈ ಕಿವಿಯಲ್ಲಿದೆ
ಆ ಕೋಗಿಲೆ ಮಾತ್ರ ನನ್ನ ಕನಸಿನಲ್ಲಿದೆ
ಮತ್ತೇ ಕೇಳಬೇಕಿತ್ತು, ಆ ಕೋಗಿಲೆಯ ರಾಗ
ನಾ ಕರೆದೆ, ಆ ಕೋಗಿಲೆ ಹಾರಿಹೋಗುವಾಗ
ಸಂತಸವು ಅದಕೆ, ಸಂಗಾತಿ ಜೊತೆ ಸೇರಿದಾಗ
ಮಾಮರ ತರುವ ಚೈತ್ರವು ಬರುವುದೇ ಬೇಗ
ಹಗಲಲಿ ಕೋಪದಿ ಉರಿವ ಆ ನೇಸರ
ಇರುಳಲಿ ಧರೆಯ ಬೆಳಗುವ ಈ ಚಂದಿರ
ಅವಕ್ಕೆ ನಿಧಾನವಾಗಿ ದಿನಗಳೆಯುವದೇ ಸಡಗರ
ಅದೇಕೆ ಇವರಿಗೆ, ನನ್ನ ಮೇಲೆ ಮತ್ಸರ
2 comments:
ಡಿಯರ್ ಸರ್
ನಿಮ್ಮ ಕವನ ತುಂಬಾ ಚೆನ್ನಾಗಿದೆ ನಿಮ್ಮ ಕವನಗಳು ಇದೆರೀತಿ ಮುಂದುವರೆಯಲೇಂದು ಹಾರೈಸುತ್ತೆನೆ..........
ಇಂತಿ ನಿಮ್ಮ
ಸುರೇಖ
ಅಬ್ಬೇನಹಳ್ಳಿ
ಧನ್ಯವಾದಗಳು... ಸುರೇಖ...
Post a Comment