
ನೋಡು ಬಾ ಪ್ರವಾಸಿಗ, ಈ ಪರಿಸರ
ಎಂದು ಕೈಬಿಸಿ ಕರೆಯುತಿಹನು ಆ ನೇಸರ
ಆ ಹಕ್ಕಿಯು ಅಲ್ಲಿ ಹಾರುತಿದೆ
ಹಾಗೆಯೇ... ಆ ಮುಗಿಲು ಸೇರುತಿದೆ
ಆಗಸಕೆ ಚುಂಬನವನು ನೀಡುತಿದೆ
ಚಿಲಿಪಿಲಿ ಎಂಬ ರವವನು ಹರಡುತಿದೆ
ಜುಳುಜುಳು ಎಂದು ಸದ್ದು ಮಾಡುತ
ಬಂದಳು ಗಂಗೆ, ಜೋರಾಗಿ ಹರಿಯುತ
ಆ ನೀರಲ್ಲಿ ನಿಂತರೇ, ತಣ್ಣಗೆ ಕೊರೆಯುತ
ಇದೆಲ್ಲಾ ಕಾಣಲು ನನ್ನ ಮನಸಿಗೆ ಹಿತ
ಅಗೋ ಅಲ್ಲಿ ಕಾಣುವ ಆ ಹಸಿರು
ನೀಡುವುದು ನಮಗೆ ಬೇಕಾದ ಉಸಿರು
ಉಳಿಸು ನೀ, ನಿನ್ನ ಮುಂದಿರುವ ಹಸಿರು
ಗಳಿಸುವಿಯಂತೆ ಇದಾದ ನಂತರ ಹೆಸರು
1 comment:
ಡಿಯರ್ ಸರ್
ನಿಮ್ಮ ಹಾತ್ಮಿಯ ಪ್ರಹ್ಲಾದ್ ಮಾಡುವ ವಂದನೆಗಳು. ಮತ್ತು
ನೀವು ವಿಸರ್ಗದ ಬಗ್ಗೆ ರೆದಿರುವ ಕವಿತೆ ನನಗೆ ತುಂಬಾ ಇಷ್ಟ ವಾಗಿದೆ ಆದ್ದರಿಂದ ನಿಮ್ಮ ಮನಸ್ಸು ಕೂಡ ನಿಸರ್ಗದಂತೆ ಇರಲಿ
Post a Comment