
ಏಳು ಎದ್ದೇಳು, ಹೇ ಬಿಸಿರಕ್ತದ ಯುವಕ
ಎಂದೂ ಹಿಂದೇಟು ಹಾಕದೇ ಸಾಗಿಸು ಬದುಕ
'ಮನಸ್ಸಿದ್ದರೇ ಮಾರ್ಗ' ಎಂಬುದನು ತಿಳಿ ನೀನು
ಅತಿಯಾಸೆಯ ಸುಖಮಾರ್ಗವನು ಮರೆ ನೀನು
ಜೀವನವನ್ನೇ ಸವಾಲಾಗಿ ಪರಿಗಣಿಸು ನೀನು
ಹತ್ತು ಜನರಿಗೆ ಮಾದರಿಯಾಗಿ ಬಾಳು ನೀನು
ನಿನ್ನೊಳಗಿನ ಭಾವದಲಿ, ದುಡಿಯುವ ಛಲವಿರಲಿ
ನಿನ್ನಲಿ ಸ್ವಂತ ದುಡಿಮೆಗೆ ಎಂದೂ ಒಲವಿರಲಿ
ಚಟುವಟಿಕೆ ನಿನ್ನ ಮನದ ಜೀವಾಳವಾಗಿರಲಿ
ಹೀಗೆಂದಿಗೂ ಹರ್ಷದಿಂದ ಬಾಳು ಸಾಗುತಲಿರಲಿ
ಯಶಸ್ಸು ನಿನ್ನದಾಗಲು ನಿನ್ನಲಿ ಛಲವಿರಬೇಕು
ಛಲವೊಂದೆ ಅಲ್ಲದೇ, ಕಾರ್ಯತತ್ಪರನಾಗಬೇಕು
ಬಿಡದೇ ಪ್ರಯತ್ನ ಮಾಡಿ, ವಿಜಯಶಾಲಿಯಾಗಬೇಕು
ನಿನ್ನ ಬದುಕುವ ರೀತಿ ಅನುಸರಿಸುವಂತಿರಬೇಕು
9 comments:
ಚೆನ್ನಾಗಿದೆ ಕವನ ಗೆಳೆಯ....!
ಧನ್ಯವಾದಗಳು... ವಸಂತು.. (@Vasantha B Eshwaragere)
ಚೆನ್ನಾಗಿದೆ.. ಯಶಸ್ಸಿನ ಪಯಣದತ್ತ ಸಾಗಬೇಕೆಂದರೆ ಇಂತಹ ಕವಿತೆಗಳು ಸ್ಪೂರ್ತಿಯಾಗಬೇಕು..
ಧನ್ಯವಾದಗಳು ಮಂಜು Manju Varaga
nice
ಯಶಸ್ಸು ನಿನ್ನದಾಗಲು ನಿನ್ನಲಿ ಛಲವಿರಬೇಕು
ಛಲವೊಂದೆ ಅಲ್ಲದೇ, ಕಾರ್ಯತತ್ಪರನಾಗಬೇಕು
ಬಿಡದೇ ಪ್ರಯತ್ನ ಮಾಡಿ, ವಿಜಯಶಾಲಿಯಾಗಬೇಕು
ನಿನ್ನ ಬದುಕುವ ರೀತಿ ಅನುಸರಿಸುವಂತಿರಬೇಕು...! nice lines...:)
Thanks.. Sunil Rao
Thanks .. Bhagirathi Chandrashekar akka...
ಜೀವನದ ಪಯಣಕ್ಕೆ ಪಾಠ ಹೇಳುವ ಮಾತುಗಳೇ ಕವಿತೆಯ ಒಡಲಾದಂತಿದೆ.. ಚೆನ್ನಾಗಿದೆ ನಿಮ್ಮ ಕವಿತೆ ಅಣ್ಣ.. ಸಂತೈಸಿ ಹಿತ ನುಡಿವಂತೆ.. ಹಿಡಿಸಿತು..:)))
Post a Comment