
ಚೆಲುವೆ, ನಿನ್ನ ಬೆಳ್ಳಿ ಮನಸಿನ ಮೇಲೆ
ನಾ ಬರೆಯುತಲಿರುವೆ ಪ್ರೇಮದಾ ಓಲೆ...
ನಾ ಅರಿತೆನು ಅವಳ ಮನವನು
ಕಾತರಿಸಿದೆ ಮನ, ಸೇರಲು ಆ ತನು
ಮುದಗೊಂಡಿದೆ ಮನ, ಕಂಡಾಗವಳನು
ಮತಿಗೆ ಮತ್ತೇರಿತು, ಕಂಡು ಆ ಚೆಲುವನು
ಪ್ರೇಮಪತ್ರವ ಬರೆದೆ ನಾ, ಆ ಚೆಲುವೆಗೆ
ನೋಟದ ಲೇಖನಿಯಲಿ, ಅದು ಹೀಗೆ:
"ಪ್ರೇಮಾಮೃತವ ನೀಡುವೆನು ಬಾಲೆಗೆ
ಮನ ನಲಿದಿದೆ, ಒಲಿದು ಆ ಮುಗುಳ್ನಗೆಗೆ
ಮನದ ಸಾಗರದಿ ಈಜುವ ಮೀನು ನೀನು
ಕಾದು ಒಣಗಿದೆ ತುಟಿ, ಹೀರಲು ಆ ಜೇನು
ಹೃದಯದಲಿ ಅರಳಿದ ಮಂದಾರವು ನೀನು
ನಿನ್ನಂತರಂಗವನು ಬಯಸುವೆ ನಾನು
6 comments:
I like so.. and so.... this song
ಪ್ರೇಮದ ಕುರಿತು ನಿಮ್ಮ ರಸಾನುಭವವಾದ ಸಾಲುಗಳು ಬಹಳ ಸೊಗಸಾಗಿ ಮುಡಿ ಬಂದಿವೆ ನಿಮ್ಮ ಕಲ್ಪನೆಗಳು ತಣ್ಣಿರಿನ ಬುಗ್ಗೆಯಂತೆ ಚಿಮ್ಮುತ್ತಾ, ಓದುವ ಹೃದಯಗಳನ್ನು ತಣಿಸಿವೆ.........
ಇಂತಿ ನಿಮ್ಮ
ಪ್ರೇಮ ಪ್ರಹ್ಲಾದ
ಧರೆ ಎಂಬ ಈ ಲೋಕದಲ್ಲಿ ಪ್ರೀತಿಸುವವರ
ಹೃದಯಗಳೆ ನನ್ನ ಸಂಪರ್ಕ..........
ನೆನೆಯುವವರ ಮನಸ್ಸೆ ನನ್ನತಾಣ......
EmailId : premaprahlada@gmail.com
mobil : 9740894485
ಪ್ರೇಮದಾ ಸ್ಪರ್ಶವೇ ಹಾಗೆ..
ಎಂಥವರನ್ನೂ ಮೋಡಿ ಮಾಡುವ ಶಕ್ತಿ ಪ್ರೀತಿಗೊಂದೆ.
ಯಾರನ್ನೂ ಬಿಡದೇ ಕಾಡುವ ಮಾಯೆ...
ನಮ್ಮ ಮನದಲಿ ಅಡಗಿದ ಕನಸುಗಳ ಚಿತ್ತಾರವೇ "ಪ್ರೇಮ"
ನಿಜವೇ.. ಪ್ರೇಮ ಪ್ರಹ್ಲಾದ
ನಿಮ್ಮ ಕವನಗಳಿಗಾಗಿ ಕಾದಿರುವ
ಇಂತಿ ನಿಮ್ಮ
ಭಕ್ತ ಪ್ರಹ್ಲಾದ್
ಹಲೋ ಪ್ರಹ್ಲಾದ್..,
ಇನ್ನಷ್ಟೂ ಹೊಸ ಕವಿತೆಗಳಿಗಾಗಿ...
http://nannedepreethi.blogspot.com ವೆಬ್ ತಾಣಕ್ಕೆ click ಮಾಡಿ ..
ಡಿಯರ್ ಸರ್
ಪ್ರೇಮದ ಬಗ್ಗೆ ಬರೆಎಇರುವ ನಿಮ್ಮ ಪ್ರೇಮದಾ ಓಲೆ ನಿಜವಾಗಿಯು ಪ್ರೀತಿಸಿದವರಿಗೆ ಒಂದು ಮಾದರಿ ಕವನವಾಗಿದೆ ಆದ್ದರಿಂದ ಪ್ರೇಮದಾ ಓಲೆ ಕವನ ಯಾರಿಗೆ ಹೇಗೋ ಗೊತ್ತಿಲ್ಲ ನಮಗೆ ಮಾತ್ರ ತುಂಬಾ ಹಿಡಿಸಿದೆ
ಇಂತಿ
ಪ್ರಹ್ಲಾದ
ನನ್ನಿವಾಳ
Post a Comment