
ಆ ಶಶಿಕಳೆಯ ಮೊಗ ಹೊತ್ತ ಚಂದ್ರಚಕೋರಿ
ಈ ಜನ್ಮದಲಿ ನೀನೆ ನನ್ನ ಚಿತ್ತಚೋರಿ
ಇತ್ತೀಚೆಗೆ ಮನದಲಿ ಹಗಲಿರುಳು ನಿನ್ನ ಧ್ಯಾನ
ಒಮ್ಮೆ ನೋಡಿದರೆ ಸಾಕು, ನಿನ್ನ ಚೆಲುವಿನ ಆನನ
ಒಮ್ಮೆ ತಾಕುವುದು, ನನ್ನ ಹೃದಯಕ್ಕೆ ಪ್ರೇಮಕಂಪನ
ನನ್ನಲಿ ನಿನ್ನನು ನೋಡುವಾಸೆ, ಹೆಚ್ಚಾಗ್ತಿದೆ ದಿನದಿನ
ನಿನ್ನ ಕಣ್ಗಳೇ ಹೇಳುತ್ತಿವೆ ನೀನೆನ್ನ ಪ್ರೇಮಾಂಗಿನಿ
ನಿನ್ನ ಕಂಡು ಕ್ಷಣದಿಂದ ಭಾವಕೆ ನೀ ಅರ್ಧಾಂಗಿನಿ
ನಿನ್ನ ನೋಟದಿಂದ ಕದ್ದೆ ಈ ಹೃದಯ ತರಂಗಿಣಿ
ನಿನ್ನನ್ನೇ ಪ್ರೀತಿಸುವೆ, ನನ್ನ ಭಾವದ ಭಾವಾಂಗಿನಿ
ನಿನ್ನ ಅಪ್ಪಿಕೊಳ್ಳಲು, ಕಾಯುತ್ತಿದೆನ್ನ ಹರವಾದ ಎದೆ
ನನ್ನೀ ತನುವು ನಿನ್ನ ಸ್ಪರ್ಶಿಸಲು ಹಾತೊರೆದಿದೆ
ನಿನ್ನ ಪ್ರೀತಿ ಮಾತು ಕೇಳಲು ಈ ಮನ ಸಿದ್ದವಾಗಿದೆ
ಹೇ ಚಕೋರಿ, ನಿನ್ನ ಚೆಂದ ನನಗೆ ಮೆಚ್ಚುಗೆಯಾಗಿದೆ
3 comments:
very nice , keep it up.. Coming poems are be great than this one.
ಪ್ರೀತಿಯ ಗೆಳೆಯ.........
ನಿಮ್ಮ ಕವನ ಓದಿದ ತಕ್ಷಣ
ನನ್ನ ಮನಸ್ಸು ಅಲ್ಲೋಲ ಕಲ್ಲೋಲವಾಗಿದೆ.
ರಮೇಶ್.ಸಿ
ಹಿರೇಹಳ್ಳಿ
ಚಳ್ಳಕೆರೆ ತಾಲ್ಲೂಕು
EmailId : ram.rameshc@yahoo.com
Mobail : 9740568645
ಹಾಯ್ ರಮೇಶ್......
ನಿಮ್ಮ ಮನಸು ಪ್ರೀತಿಯಲ್ಲಿ ತೋಯ್ದಂತಿದೆ.. ಅಲ್ಲವೇ?
Post a Comment