
ಆ ಕನಸಿನಲ್ಲಿಯೇ, ಕಾಣುವೆ ನನ್ನವಳ ಸೊಗಸು
ಅವಳ ನಗೆಯ ಅಲೆಯರಾಗ ನನ್ನೆದೆಯ ಮೀಟುತಾ
ಹಾದುಹೋಗುವಳು ನನ್ನೆದೆ ಸುಖ ನೀಡುತಾ
ಪ್ರತಿಯೊಂದು ಭಂಗಿಯಲಿ ಚಿತ್ತಸಾಗರದಿ ತೇಲುತಾ
ನನ್ನ ಮನದ ಭಾವ ಕದ್ದಳು, ಅವಳು ನಸುನಗುತಾ
'ದುಂಬಿಯನ್ನರಸಿದ ಸುಮ'ದಂತೆ ಇರುವಳು ನನ್ನೆದೆಯಲಿ
ಹಾಲಲಿ ಬೆರೆತ ಜೇನಿನಂತೆ ಮಿಂದಳೆನ್ನ ಭಾವದಲಿ
ಇರುಳಲಿ ಗಂಧ ಚೆಲ್ಲುವ ಹೂವಾದಳು ಮನದಲಿ
ಕಾಲವ ದೂಡುತಿಹಳು ನನ್ನ ಪರವಾನಗಿ ಬೇಡುತಲಿ
ಬೇರೆ ಯೋಚನೆಯಿಲ್ಲವೆಂತು ಅವಳನ್ನೇ ತುಂಬಿದ ಮನಸು
ಕೇಳಿಸುವುದು 'ನಿನಗಾಗಿಯೇ ನಾನು' ಎನ್ನೋ ಗುಸುಗುಸು
ನಾ ಏನೂ ಹೇಳದಿದ್ದರೂ, ಅವಳಿಗಿಲ್ಲ ನನ್ನಲಿ ಮುನಿಸು
ಸದಾ ಹಿತವಾಗಿರುವುದು ನನಗೆ "ನಾ ಕಂಡ ಕನಸು"
1 comment:
ಡಿಯರ್ ಸರ್
"ನಾ ಕಂಡ ಕನಸು"ಕವನವು ತುಂಬಾ ಚೆನ್ನಾಗಿದೆ ಪದಗಳು ಒಂದಕ್ಕೊಂದು ಅರ್ಥ ಪೂರ್ಣವಾಗಿ ಮೂಡಿಬಂದಿ ಇನ್ನೂ ಮುಂದೆ ಶ್ರಾವಣ ಮಾಸದಲ್ಲಿ ಗಿಡ,ಮರಗಳು ಚಿಗುರಿದ ಹಾಗೆ ನಿಮ್ಮ ಕವನಗಳು ಚಿಗುರಿದ ಮರದಡಿಯಲ್ಲಿ ಹಾಯಾಗಿ ಹಾಡಲೇಂದು ಹಾರೈಸುತ್ತೇನೆ..........
ಭಕ್ತ ಪ್ರಹ್ಲಾದ & ರಮೇಶ್
ನನ್ನಿವಾಳ & ಹಿರೇಹಳ್ಳಿ
emailId : premaprahlada@gmail.com
ram.clk143@yahoo.com
Post a Comment