
ಹುಡುಗಿಯರೇ ಹೀಗೆ, ಅದೇಕೋ ಗೊತ್ತಿಲ್ಲ
ಎಲ್ಲರಂತೆ ಇರಲು ಅವರಿಗೇಕೆ ಆಗುವುದಿಲ್ಲ
ತಾವೇ ಕಟ್ಟಿದ ಕೋಟಿ ಕನಸುಗಳ ನಡುವೆ
ಸಿಲುಕಿ, ಜೇಡದಂತೆ ಬಿದ್ದು ಒದ್ದಾಡುವರಲ್ಲ
ಗರಗಸದಂತೆ ಕೊರೆವ ಕಹಿನೆನಪುಗಳ ನಡುವೆ
ಆ ನೆನಪ ಸುನಾಮಿ ಅಲೆಯಿಂದ ತತ್ತಿರಿಸುವರಲ್ಲ
ತನ್ನೆದೆಯ ಮಡಿಲಿನಲಿ ದುಃಖಸಾಗರವೇ
ಭೋರ್ಗರೆಯುತ್ತಿದ್ದರೂ ನಗುತಾ ನಲಿಯುವರಲ್ಲ
ತಾವೇ ತೆರೆದಿಟ್ಟ ಕಲ್ಪನೆಗಳ ದರ್ಪಣವೇ
ಚೂರಾದರೂ, ನೋವನುಂಗಿ ಸುಮ್ಮನಾಗುವರಲ್ಲ
ತಾವೇನೆ ಮಾಡಿದರೂ, ಒಲವಿಗೋಸ್ಕರವೇ
ತಮಗಾಗಿ ಎಂದೂ ಏನೂ ಬಯಸಿದವರಲ್ಲ
ಗೆಳೆಯನೇ ಗೊತ್ತಾ? ಹುಡುಗಿಯರ ಗೊಡವೆ
ಅದ್ಯಾಕೆ ಅವರು ಹೀಗೆ, 'ಆ ದೇವರೆ ಬಲ್ಲ'
6 comments:
ಪ್ರಿಯ ರಾಘವೇಂದ್ರ
ಬ್ಲಾಗ್ ತುಂಬಾ ಬರೀ ಕವಿತೆಗಳನ್ನೇ ತುಂಬಿ ಕಳಿಸಿದ್ದೀರಿ, ಬಟ್ಟಲ ತುಂಬಾ ಕೇವಲ ಮಧು ತುಂಬಿ ಬೊಗಸೆಯಲ್ಲಿಟ್ಟಂತೆ.
ಕವಿತೆಗಳು ಚೆನ್ನಾಗಿವೆ.ಇನ್ನಷ್ಟು ಪ್ರಭುದ್ಧರಾಗಿ ಬರೆಯೋದಕ್ಕೆ ಪ್ರಯತ್ನಿಸಿ. ಬದುಕು ನಿಮಗೆ ಅದನ್ನು ಕಲಿಸುತ್ತದೆ.
ಗುಡ್ ಲಕ್.
ರಾಘು
ಇರಲಿ
ಸದಾ ಹೀಗೆ
ನಿನ್ನ ನಗು
Yery nice,
ಥ್ಯಾಂಕೂ.... ಸರ್..
ಪ್ರಯತ್ನ ಸಾಗುತಲಿರುತ್ತದೆ,
ರಾಘು ಇರಲಿ ಸದಾ ಹೀಗೆ ನಿನ್ನ ನಗು....
ವಾಹ್..!
ನಾನು ನಗುನಗುತಾ ಇರಬೇಕಾ... ಮೇಡಮ್,
Anyway ಥ್ಯಾಂಕ್ಯೂ ಜ್ಯೋಸ್ನ
hi.....thumba chanagidhe ee kavana...... jeevanada prathi hanthadallu nimage geluvirali endhu haraisuthene.......
Post a Comment