ಸಡಗರದಿ ನಡೆದಿದೆ, ಮದಕರಿಯ ಪಟ್ಟಾಭಿಷೇಕ
ಹಸಿರು ಚಪ್ಪರ, ತಳಿರು ತೋರಣವ ಹಾಕಿ
ಪುಷ್ಪಾಲಂಕಾರದಿ ದುರ್ಗವಾಯ್ತು ನಂದನವನ
ಹೊಸಬಟ್ಟೆಯನ್ನುಟ್ಟು ಲಾವಣಿಯ ಹಾಡುತಲಿ
ನಲಿಯುತಿಹರು ಸಂತಸದಿ ದುರ್ಗದಾ ಜನ
ಬಗೆಬಗೆಯ ಬಣ್ಣದ ಸೀರೆ-ಕುಪ್ಪಸವ ತೊಟ್ಟು
ಬಂಗಾರದ ಒಡವೆಯಿಂದ ಮೈಯನ್ನಲಂಕರಿಸಿ
ಗರತಿಯರು ಆರತಿ ಬೆಳಗಿದರು ತಿಲಕವನ್ನಿಟ್ಟು
ಸಂಭ್ರಮಿಸಿದರು, ಮೆದಕೇರಣ್ಣಗೆ ಕೀರಿಟವ ತೊಡಿಸಿ
ರಾಜಗುರು ಮುರುಘಶ್ರೀಗಳ ಕೃಪಾಕಟಾಕ್ಷದಿ
ಮೆದಕೇರಣ್ಣ ರಾಜನಾದಾಗಿನ ಕ್ಷಣದ ಹರ್ಷ
ಬುರುಜು-ಬತೇರಿಗಳಲ್ಲಿ ಕಹಳೆಯನು ಊದಿ
ಮಾರ್ದನಿಸಿತು, ದುರ್ಗದ ಜನರ ಜಯಘೋಷ
9 comments:
ಪಟ್ಟಾಭಿಷೇಕದ ವರ್ಣನೆ ವೈಭವಯುತವಾಗಿ ಮೂಡಿ ಬಂದಿದೆ...
ದುರ್ಗದ ಸಿರಿಯ ಪಟ್ಟಾಭಿಷೇಕದ ದೃಶ್ಯ ವೈಭವವನ್ನು ಚನ್ನಾಗಿ ಬಣ್ಣನೆ ಮಾಡಿರುವಿರಿ. ಸಂತೋಷವಾಯಿತು. ಮದಕರಿ ನಾಯಕರು ಆಳಿದ ಕೋಟೆಯಲ್ಲಿ ವೈಭವದ ಉತ್ಸವ ಜರುಗುತ್ತಿರುವುದು ಸಂತೋಷ ತಂದಿದೆ.
ಪಟ್ಟಾಭಿಷೇಕಕ್ಕೆ ನಮ್ನೆಲ್ಲಾ ಬಿಟ್ಟು ನೀವೊಬ್ರೇ ಹೋಗಿದ್ರಾ.. ಇರ್ಲಿ...ಇರ್ಲಿ.. ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದೀರಿ... ಚೆನ್ನಾಗಿದೆ...
ಅದಕ್ಕೆ ತಾನೇ.. ಅದನ್ನೆಲ್ಲಾ.. ನಿಮಗೆ ವರ್ಣಿಸಿದ್ದು.. ಗೆಳೆಯ Balachandra Hegde.
ತ.ರಾ.ಸು. ರವರ "ದುರ್ಗಾಸ್ತಮಾನ" ಕಾದಂಬರಿಯನ್ನು ಓದುವಾಗ ನಮ್ಮ ಚಿತ್ರದುರ್ಗದ ಮೆ(ಮ)ದಕರಿನಾಯಕರ ಪಟ್ಟಾಭಿಷೇಕದ ಸನ್ನಿವೇಶವನ್ನು ಪದಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ.
ಧನ್ಯವಾದಗಳು ಗೆಳೆಯ Vasanth Kumar
ನಿಮ್ಮ ಕಾಮೆಂಟುಗಳಿಗೆ ಹಾಗೂ ಪಟ್ಟಾಭಿಷೇಕದ ಸಂತಸದಲ್ಲಿ ನೀವೂ ಪಾಲ್ಗೊಂಡಿದ್ದಕ್ಕೆ ಧನ್ಯವಾದಗಳು ಸತೀಶ್ ಡಿ. ಆರ್. ರಾಮನಗರ..
ಪಟ್ಟಾಭಿಷೇಕದ ವರ್ಣನೆ ಸೊಗಸಾಗಿ ಮೂಡಿಬ೦ದಿದೆ
@Sindhu Bhat .. ಧನ್ಯವಾದಗಳು.. ಸಿಂಧುರವರೇ...
Post a Comment