
ನನ್ನೆದೆಯ ಬಾನಲ್ಲಿ, ತಿಂಗಳ ಬೆಳಕು ನೀನು
ನನ್ನ ಕನಸಿನ ರಾಣಿಯಾಗಿ ಕಾಡಿದವಳು ನೀನು
ನನ್ನ ಕಣ್ಣಲಿ ಪ್ರತಿ ಕನಸು ನಿನಗಾಗಿ ಕಣೇ
ನನ್ನೆದೆಯಲಿ ಅರಳುವ ಪ್ರೀತಿ ನಿನಗಾಗಿ ಕಣೇ
ನಿನ್ನ ಮನದಾಳದ ಪ್ರೀತಿ ನನಗೆ ಬೇಕು ಕಣೇ
ನಿನ್ನ ಅದರಗಳ ಸಿಹಿಜೇನು ನನಗಾಗಿಯೇ ಕಣೇ
ಇಷ್ಟುದಿನದ ಕನಸಲಿ, ಕಾಡಿದ್ದು ನೀನೇನಾ?
ನಾ ತಬ್ಬುವಷ್ಟರಲ್ಲಿ ಮಾಯವಾದದ್ದು ನೀನಾ?
ತಿಂಗಳ ರಾತ್ರಿಯಲಿ ಎದೆಮೇಲೆ ಮಲಗಿದ್ದು ನೀನಾ?
ಇಷ್ಟುದಿನದ ಸಖ್ಯತೆಯಲಿ, ಏನೂ ಗುರುತಿಸಲಿಲ್ಲ ನಾ
ಆ ಎಲ್ಲಾ ಕನಸುಗಳ ನನಸಾಗಿಸು ಚೆಲುವೆ
ಎಳ್ಳಷ್ಟೂ ಬೇಡ ಕಣೆ, ಈ ಜಗದ ಗೊಡವೇ
ಕೊನೆಕ್ಷಣದ ಉಸಿರಿರೊವರೆಗೆ ನಾ ಪ್ರೀತಿಸುವೆ
ನವದಂಪತಿಗಳಾಗುವ ಸಮಯಕೆ ನಾ ಕಾಯುವೆ
3 comments:
very nice keep it up one day or another day you must become kalyan
Oh..!
ಪ್ರೇಮಕವಿ 'ಕಲ್ಯಾಣ್'ರಂತೆ ಪ್ರೀತಿಯ ಸವಿಯನ್ನು ಹಂಚುವಂತೆ ಕಾರ್ಯಮಗ್ನನಾಗಿ ಮಾಡಿರುತ್ತೀರಿ..
ಧನ್ಯವಾದಗಳು ಜ್ಯೋಸ್ನರವರೇ
ಬಹಾಳ ಚನ್ನಾಗಿರುವ ಕವಿತೆಗಳಿಗಾಗಿ ಕಾದಿರುವ
Post a Comment