
ಅವಳ ಮುಡಿಗೆ ಮುಡಿಸಿದೆ ನಾ ಮೊಲ್ಲೆ
ಅದಕೆ ನಸುನಾಚಿ ನೀರಾದಳು ನನ್ನ ನಲ್ಲೆ
ನನ್ನ ಬೆನ್ನಹಿಂದೆ ನಡೆದು ಬಂದವಳು ಇವಳು
ನನ್ನ ಮನಕೆ ಪ್ರೇಮಗಂಧ ಪೂಸಿದಳು ಇವಳು
ನನ್ನ ಕನಸಿನ ರಾಣಿಯಾದವಳು ಇವಳು
ನನ್ನ ಮುದ್ದುಮಕ್ಕಳ ತಾಯಿಯಾದಳಿವಳು
ನೂರು ಚಿಂತೆ ಮಾಯವಾಯ್ತು ಇವಳನು ಕಂಡಾಗ
ಮನ ನಕ್ಕುನಲಿಯುವುದು ಅವಳು ನಗುವಾಗ
ಎಂದಿಗೂ ಸಿಗಲಿ ಅವಳೆನ್ನ ಸತಿಯಾಗುವ ಯೋಗ
ಭಾಗ್ಯವಂತನು ನಾನು ಎನಿಸುತಿದೆ ರಮಿಸುವಾಗ
ಮೊದಲ ಸಾರಿ ಕಂಡಾಗ ನಿಂತಿದ್ದಳು ತಲೆಬಾಗಿ
ಮೊದಲ ರಾತ್ರಿ ಕಂಡಿದ್ದಳು, ಬಲು ಚೆಲುವಾಗಿ
ಇಂದಿಗೂ ನಾ ಬದುಕಿರುವೆ ಅವಳ ಪ್ರೇಮಿಯಾಗಿ
ಜನ್ಮಜನ್ಮದಲಿ ಸಿಗಲಿ ಅವಳೆನ್ನ ಸತಿಯಾಗಿ
4 comments:
~ : S U P E R : ~
ಡಿಯರ್ ಪ್ರೇನ್ ಡ್
ಹುಡುಕುತ್ತಿರುವೆ ಅವಳಿಗೋಸ್ಕರ
ಚಳ್ಳಕೆರೆಯ ಗಲ್ಲಿ ಗಲ್ಲಿಯಲ್ಲಿ
ನೀವಾದರು ಕಂಡಿರಾ ಅವಳನ್ನು
ರಮೇಶ್. ಸಿ
ಹಿರೇಹಳ್ಳಿ
ಚಳ್ಳಕೆರೆ ತಾಲ್ಲೂಕು
Email ID : ram.rameshc@yahoo.com
Mobail : 9740568645
ಅರ್ಜುನ್ Thanks... re....
ಏನ್ ಗುರು... ಕವಿತೆ ಇಷ್ಟವಾಯ್ತ..
ಹಾಯ್ ರಮೇಶ್,
ನಲ್ಲೆಯ ಹುಡುಕುವ ಸನ್ನದ್ದದಲ್ಲಿ ಇದ್ದೀರಾ...
ನನಗೆ ಕಂಡರೇ ಖಂಡಿತಾ ಹೇಳುತ್ತೇನೆ.
ನಾನಂತೂ ಖಂಡಿತ ನಿಮ್ಮ ಮದುವೆಯ ದಿನ ಬರುತ್ತೇನೆ. ಅಲ್ಲಿಯೇ ನಿಮ್ಮ ನಲ್ಲೆಯನ್ನು ತೋರಿಸುತ್ತೇನೆ. ಅಲ್ಲಿಯವರೆಗೂ ಹುಡುಕುತಲಿರಿ
Post a Comment