Tuesday, September 30, 2008

ಸರ್ ಎಂ. ವಿಶ್ವೇಶ್ವರಯ್ಯ

ಪ್ರತಿದಿನವೂ ಸ್ಮರಿಸಲೇಬೇಕು, ನಿನ್ನ ಹೇ ಶತಾಯುಷಿ
ಕನ್ನಡಿಗನ ಮನದಾಳದಿ ನೆಲೆಸಿದ ನೀ ಧೀರ್ಷಾಯುಷಿ

ಮರೆಯಲಾಗದು ನಮಗೆ ನಿಮ್ಮ ಸೇವೆಯ ಸಾರ
ನಿಮ್ಮಲಿ ಕಾಣಬಹುದು ಸದ್ಗುಣಗಳ ಮಹಾಪೂರ
ಕನ್ನಡಿಗನಿದೆ ನಿಮ್ಮ ಮೇಲಿದೆ ಪ್ರೀತಿ ಅಪಾರ
ನಿಮ್ಮಿಂದ ಕಲಿಯಬೇಕು ಶಿಸ್ತು, ಕಾರ್ಯವೈಖರಿ ವಿಚಾರ

ಭರತಭೂಮಿಯ ಏಳಿಗೆಯ ಕಾರ್ಯಕರ್ತರು ನೀವು
ನಮ್ಮಂತ ಯುವಕರಿಗೆ ಸ್ಪೂರ್ತಿದಾಯಕರು ನೀವು
ಅಗಾಧ ಸ್ಮರಣಶಕ್ತಿಯ ಮಹಾಚೈತನ್ಯವೇ ನೀವು
ನಿಮ್ಮಂತೆ ಶಿಸ್ತನ್ನು ಪರಿಪಾಲಿಸುವೆವು ನಾವು

ಮೈಸೂರಿನ ದಿವಾನರಾದರೂ ನಿಮ್ಮಲಿ ಸ್ವಾರ್ಥವಿರಲಿಲ್ಲ
೧೦೦ ವರ್ಷ ದಾಟಿದರೂ ನಿಮ್ಮ ಜ್ಞಾನದಾಹ ಇಂಗಲಿಲ್ಲ
ನಿಮ್ಮನ್ನಗಲಿದ ದುಃಖ ಭಾರತಾಂಬೆಗೆ ತಡೆಯಾಗಲಿಲ್ಲ
ನಿಮ್ಮಲ್ಲಿಯ ಚೇತನವು ತುಂಬಲಿ, ಈ ಯುವಕರಿಗೆಲ್ಲ

12 comments:

RAGHAVENDRA R said...

ವಿಶ್ವೇಶ್ವರಯ್ಯನವರಂತಹ ಶಿಸ್ತು ನಮ್ಮಲ್ಲಿರಬೇಕು... ಎಂಬ ಆಶಾಭಾವದಲ್ಲಿ.....

ಮೌನರಾಗ said...

Gud one...

olleya kavite..

Sathis D. Ramanagara said...

ಸ್ಮರಣೀಯರು ನಮ್ಮ ಸರ್ ಎಂ ವಿ ರವರು. ಅವರ ಕೊಡುಗೆಗಳು ಕೇವಲ ಕರ್ನಾಟಕಕ್ಕೇ ಅಷ್ಟೇ ಸೀಮಿತವಾಗಿರಲಿಲ್ಲ ಭಾರತದಾದ್ಯಂತ, ವಿದೇಶಗಳಲ್ಲೂ ಸಹ ತಮ್ಮ ಸೇವೆಯ ಮೂಲಕ ಜನಮಾನಸದಲ್ಲಿ ಅಚ್ಚಳಿಯದ ನೆನಪಾಗಿ ಈಗಲೂ ಉಳಿದಿದ್ದಾರೆ. ಅವರ ಬಗ್ಗೆ, ಅವರ ನೆನಪನ್ನು ಹೊತ್ತು ತರುವ ಸುಂದರ ಕವಿತೆ.

RAGHAVENDRA R said...

ಸರ್.ಎಂ.ವಿ.ಯವರ ಮೇಲಿನ ಅಭಿಮಾನವೇ.. ಈ ಕವಿತೆಗೆ ಸ್ಪೂರ್ತಿ.

RAGHAVENDRA R said...

ಧನ್ಯವಾದಗಳು ಗೆಳೆಯ ಸತೀಶ್ ಡಿ. ಆರ್. ರಾಮನಗರ

Paresh Saraf said...

ಇಂತಹ ಭವ್ಯ ವ್ಯಕ್ತಿತ್ವದ ಬಗ್ಗೆ ಬರೆದ ಈ ಕವಿತೆ ಅಷ್ಟೇ ಭವ್ಯವಾಗಿದೆ.. ಶುಭವಾಗಲಿ :)

Sindhu Bhat said...

ಸೊಗಸಾಗಿ ಮೂಡಿಬ೦ದಿದೆ..

RAGHAVENDRA R said...

@Sindhu Bhat.. ಧನ್ಯವಾದಗಳು.. ಸಿಂಧು ರವರೇ..

Bhimsen Purohit said...

ದೇಶ ಕಂಡ ಸಾರ್ವಕಾಲಿಕ ಅಭಿಯಂತರರು.. ಅವರ ನಡೆ-ನುಡಿ, ಸದಾ ರಾಷ್ಟ್ರದ ಅಭ್ಯುದಯಕ್ಕಾಗಿ ಯೋಚಿಸುತ್ತಿದ್ದ ರೀತಿ ಎಲ್ಲವೂ ಮಾದರಿ..
ಇನ್ನು ಅವರನ್ನು ಕವನದಲ್ಲಿ ಮೂಡಿಸಿದ ಪರಿಯೂ ಅಷ್ಟೇ ಸುಮಧುರ..

Banavasi Somashekar said...

‎'ಸರ್'' ಗೆ ಸಲ್ಲಿಸಿದ ನುಡಿ ನಮನ.ಇಷ್ಟವಾಯಿತು.

RAGHAVENDRA R said...

ಕೆಲ ವರುಷಗಳ ಹಿಂದೆ ಬರೆದ ಕವಿತೆ ಇದು. ನಾನೂ ಒಳಗೊಂಡಂತೆ ಅನೇಕರಿಗೆ ರೋಲ್ ಮಾಡೆಲ್ ಆಗಿರುವ ಅವರ ಕುರಿತು ಎಷ್ಟೂ ಬರೆದರೂ ಸಾಲದು. ಅಂತಹ ಮಹಾನ್ ವ್ಯಕ್ತಿಗೆ ನುಡಿ ನಮನ ಸಲ್ಲಿಸಿದ್ದೇನೆ. ಅವರ ಕುರಿತ ಲೇಖನಗಳನ್ನು ಓದುವಾಗ ಮೈರೋಮಾಂಚನವಾಗುತ್ತದೆ. ಅಲ್ಲದೇ ನಾವೂ ಇವರ ಆದರ್ಶಗಳನ್ನು ಪಾಲಿಸಬೇಕೆಂದು ಅನಿಸದೇ ಇರುವುದಿಲ್ಲ. ಧನ್ಯವಾದಗಳು ಗೆಳೆಯ Bhimasen Purohit & Banavasi Somashekhar

RAGHAVENDRA R said...

ಕವಿತೆಯನ್ನು ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು...